Wednesday, September 30, 2009

ಆರನೇ ವರ್ಷದ ನುಡಿಹಬ್ಬ... "ಆಳ್ವಾಸ್ ನುಡಿಸಿರಿ - ೨೦೦೯"

ಮೂಡಬಿದರೆ:

ಪ್ರತಿ ವರ್ಷದಂತೆ ಈ ಬಾರಿಯ "ಅಳ್ವಾಸ್ ನುಡಿಸಿರಿ", "ಆಳ್ವಾಸ್ ಎಜುಕೇಶನ್ ಫೌಂಡೇಶನ್" ಆಶ್ರಯದಲ್ಲಿ ನವೆಂಬರ್ ೬ ೭ ಮತ್ತು 8ರ ತನಕ ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ಅಯೋಜಿಸಲ್ಪಟ್ಟಿದೆ. ನಾಡುನುಡಿಯ ರಾಷ್ಟ್ರೀಯ ಸಮ್ಮೇಳನ `ಆಳ್ವಾಸ್ ನುಡಿಸಿರಿ - 2009'ರ ಅಧ್ಯಕ್ಷರಾಗಿ ನಾಡಿನ ಹಿರಿಯ ಸಂಶೋಧಕ ಡಾ.ಹಂ.ಪ.ನಾಗರಾಜಯ್ಯ ಆಯ್ಕೆಯಾಗಿದ್ದಾರೆ. ಇ ಸಾಲಿನ ಸಮ್ಮೇಳನ "ಕನ್ನಡ ಮನಸ್ಸು : ಸಮನ್ವಯದೆಡೆಗೆ"' ಎಂಬ ಘೋಶ ವಾಕ್ಯದೊಂದಿಗೆ ನಡೆಯಲಿದೆ.

ಕನ್ನಡ ನಾಡು ನುಡಿ ಕಲೆಗೆ ಅನುಪಮ ಸೇವೆ ಸಲ್ಲಿಸಿದ ಹತ್ತು ಮಂದಿಗೆ ನುಡಿಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸಮಾರೋಪ ಸಮಾರಂಭದ ಸಂದರ್ಭದಲ್ಲಿ ಗಣ್ಯರನ್ನು ಸನ್ಮಾನಿಸಲಿದ್ದಾರೆ. ಸಮಾರೋಪ ಭಾಷಣವನ್ನು ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ನೆರವೇರಿಸಲಿದ್ದಾರೆ.

ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ನಾಡಿನ ಹೆಸರಾಂತ ಸಾಹಿತಿಗಳು, ಚಿಂತಕರು, ಕಲಾವಿದರು ಪಾಲ್ಗೋಳ್ಳಳಿದ್ದಾರೆ. ಮಾತಿನ ಮಂಟಪ, ಕಥಾ ಸಮಯ, ಕವಿಸಮಯ, ಕವಿನಮನ ಎಂಬ ಕಾರ್ಯಕ್ರಮಗಳು ನಡೆಯಲಿವೆ.
ಮುಂಜಾವಿನ ಘಂಟೆ ಸಮಯ ೫ರಿಂದ ೭ರ ತನಕ ಮತ್ತು ಮುಸ್ಸಂಜೆ ೫ರಿಂದ ೧೨.೩೦ರ ತನಕ ನೃತ್ಯ, ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇಶ ವಿದೇಶದ ಪ್ರಖ್ಯಾತ ಪ್ರತಿಭೆಗಳು ನಡೆಸಿಕೊಡುವವರಿದ್ದಾರೆ.

ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಪ್ರತಿನಿಧಿಗಳನ್ನಾಗಿಸಿ ಆಹ್ವಾನಿಸಿ ಅವರಲ್ಲಿ ಸಾಹಿತ್ಯ,ಕಲೆ,ಸಂಸ್ಕೃತಿಯ ಕುರಿತು ಅಭಿರುಚಿ ಬೆಳೆಸುವ ದ್ರಷ್ಟಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ವ್ಯವಸ್ಥೆಯನ್ನು ಮಾಡಲಾಗಿದೆ.

ವಿಸೂ: ವಿದ್ಯಾರ್ಥಿಗಳು ಶಾಲೆಯ ಮುಖ್ಯಸ್ಥರಿಂದ ಸಹಿ ಮಾಡಲ್ಪಟ್ಟ ಪತ್ರವನ್ನು ಮುಂಚಿತವಾಗಿ ಕಳುಹಿಸಬೇಕೆಂದು ಅಯೋಜಕರ ಮನವಿ.

ಸಾರ್ವಜನಿಕರಿಗಾಗಿ ಪ್ರತಿನಿಧಿ ಶುಲ್ಕ:
ಸಮ್ಮೇಳನದಲ್ಲಿ ಪಾಲ್ಗೊಳ್ಳುವವರಿಗೆ ಪ್ರತಿನಿಧಿ ಶುಲ್ಕ ಕೇವಲ ರೂಪಾಯಿ ೧೦೦. ಈ ಶುಲ್ಕವನ್ನು ನಗದು/ಮನಿಯಾರ್ಡರ್/ಡಿ.ಡಿ. ರೂಪದಲ್ಲಿ ಪಾವತಿಮಾಡಬಹುದು. ಡಿ.ಡಿ.ಯನ್ನು in favor of "Alvas Nudisiri" ಎಂಬ ಹೆಸರಿನಲ್ಲಿ ಪಡೆಯುವಂತೆ ಮತ್ತು ಮೂಡಬಿದರೆಯಲ್ಲಿ ಸಂದಾಯವಾಗುವಂತೆ ಪಾವತಿಸಲು ಕೋರಲಾಗಿದೆ ಮತ್ತು ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡಬಿದರೆ, ದಕ್ಷಿಣ ಕನ್ನಡ ಇ ವಿಳಾಸಕ್ಕೆ ಅಂಚೆಯ ಮುಖಾಂತರ ಕಳುಹಿಸಲು ವಿನಂತಿಸಲಾಗಿದೆ.

ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ: 08258-238104 ನಿಂದ 238111 ಸಂಪರ್ಕಿಸಬಹುದು.

No comments: