Tuesday, September 27, 2011

ಆಳ್ವಾಸ್ ನುಡಿಸಿರಿ ಅಧ್ಯಕ್ಷರಾಗಿ ಕಲಬುರ್ಗಿ

ಆಳ್ವಾಸ್ ನುಡಿಸಿರಿ ಅಧ್ಯಕ್ಷರಾಗಿ ಕಲಬುರ್ಗಿ

ಮಂಗಳೂರು, ಸೆ.26: ಆಳ್ವಾಸ್ ಎಜುಕೇಷನ್ ಫೌಂಡೇಶನ್ ಆಶ್ರಯದಲ್ಲಿ ಮೂಡಬಿದ್ರೆಯಲ್ಲಿ ನವೆಂಬರ್ 11ರಿಂದ 13ರವರೆಗೆ ನಡೆಯಲಿರುವ ಎಂಟನೆ ವರ್ಷದ ಆಳ್ವಾಸ್ ನುಡಿಸಿರಿ ಸಾಹಿತ್ಯ ಸಮ್ಮೇಳನ ನಾಡೋಜ ಡಾ.ಎಂ.ಎಂ.ಕಲಬುರ್ಗಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವಾ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕನ್ನಡ ಮನಸ್ಸು ಸಂಘರ್ಷ ಮತ್ತು ಸಾಮರಸ್ಯ-ಪರಿಕಲ್ಪನೆಯಲ್ಲಿ ಈ ಬಾರಿಯ ನುಡಿಸಿರಿ ಸಮ್ಮೇಳನ ನಡೆಯಲಿದೆ. ಕಳೆದ ಏಳು ವರ್ಷಗಳಲ್ಲಿ ಸರಕಾರದ ಯಾವುದೇ ನೆರವು ಪಡೆಯದೆ ಮಾದರಿ ಸಮ್ಮೇಳನ ನಡೆಸಿದ ಪ್ರಶಂಸೆ ನಾಡಿನ ಜನರಿಂದ ವ್ಯಕ್ತವಾಗಿದೆ. ಸಮ್ಮೇಳನದಲ್ಲಿ ಜನಸಹ ಭಾಗಿತ್ವ ಹೆಚ್ಚಿಸಲು ನಾಡಿನ ವಿವಿಧ ಕಡೆಗಳಲ್ಲಿ ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುವುದು ಹಾಗೂ ಸ್ಥಳೀಯ ಸಮಿತಿ ರಚಿಸಲಾಗುವುದು. ಕನ್ನಡ ಕಟ್ಟುವ ಕೆಲಸದಲ್ಲಿ ಯುವ ಮನಸ್ಸುಗಳು ಹೆಚ್ಚು ಪಾಲ್ಗೊಳ್ಳಬೇಕಾಗಿದೆ ಎಂದು ಆಳ್ವಾ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಕಾರ್ಯದರ್ಶಿ ಧನಂಜಯ ಕುಂಬ್ಳೆ, ಮಾಧ್ಯಮ ಸಂಪರ್ಕಾಧಿಕಾರಿ ಹರೀಶ್ ಆದೂರು ಉಪಸ್ಥಿತರಿದ್ದರು.

ಜಾಗತಿಕ ಸಮ್ಮೇಳನ ಮುಂದಿನ ಗುರಿ
ಹತ್ತನೆ ವರ್ಷದ ನುಡಿಸಿರಿ ಸಮ್ಮೇಳನವನ್ನು ಜಾಗತಿಕ ಸಮ್ಮೇಳನವಾಗಿ ಆಯೋಜಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಪೂರಕ ವಾದ ತಯಾರಿ ಈಗಾಗಲೇ ನಡೆಯುತ್ತಿದೆ ಎಂದು ಮೋಹನ ಆಳ್ವಾ ತಿಳಿಸಿದರು.

No comments: